ಆತ್ಮಜ್ಞಾನವು ದುಃಖಿಸುತ್ತಿರುವವನನ್ನು ತನ್ನ ಸಹೋದರನೆಂದು ಗುರುತಿಸಬಲ್ಲದು. ಒಮ್ಮೆ ಅಜ್ಞಾನದ ಭ್ರಮೆಯಿಂದಾಗಿ ಆತ್ಮಜ್ಞಾನವು ಬಹಳ ಮಂದವಾದಾಗ ಅದು ವಿವೇಚಿಸಲು ಸಾಧ್ಯವಾಗುವುದಿಲ್ಲ. ಮನಸ್ಸು ಆತ್ಮದ ಕನ್ನಡಿ. ಮನಸ್ಸು ಮತ್ತು ಇತರ ಅಂಗಗಳು ಮಂದವಾಗಿವೆ ಮತ್ತು ವಾಸ್ತವವನ್ನು ಪ್ರತಿಬಿಂಬಿಸುವುದಿಲ್ಲ. ಆದುದರಿಂದ ಭಾತೃತ್ವವಿದ್ದರೂ ಸಹಾನುಭೂತಿ ಇರಲಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಹೀಗೆ ಕರುಣಾಮಯಿಯು ಸ್ಪಷ್ಟವಾದ ಜ್ಞಾನ ಮತ್ತು ಆತ್ಮದೃಷ್ಟಿಯುಳ್ಳವನು ಎಂದು ತಿಳಿಯುತ್ತದೆ.